ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಮಸ್ಕತ್ ಚೊಚ್ಚಲ ಯಾತ್ರೆ (ದಿನ -೧)

ದಿನ-೧ >>>>>>>>>>>>> ದಿನಾಂಕ : ೬-ಡಿಸೆಂಬರ್-೨೦೧೯

|| ಶ್ರೀ ಶ್ರೀ ೧೦೦೮ ಸುಗುಣೇಂದ್ರ ತೀರ್ಥ ಶ್ರೀಪಾದರ ಪ್ರಥಮ ಮಸ್ಕತ್ ದಿಗ್ವಿಜಯ ಯಾತ್ರೆ ||


ಜುಲೈ ತಿಂಗಳಿನಿಂದ ಕಾತುರ, ಆತುರ, ಭಕ್ತಿ, ಸಂತೋಷ ಹಾಗೂ ಹುಮ್ಮಸ್ಸಿನಿಂದ ಕಾಯುತ್ತಿದ್ದಂತಹ ಡಿಸೆಂಬರ್ ತಿಂಗಳ ಆರನೆಯ ತಾರೀಖಿನ ಶುಕ್ರವಾರದ ಶುಭಸಂಜೆ ಬಂದೇ ಬಿಟ್ಟಿತು. ಸುಮಾರು ಸಂಜೆ ೫:೧೫ ಘಂಟೆಗೆ ಬೆಂಗಳೂರಿನಿಂದ ಮಸ್ಕತ್ತಿಗೆ ವಿಮಾನದ ಆಗಮನವಾಯಿತು. ಗೋಧೂಳಿ ಸಮಯ ಅಂದರೆ ಸುಮಾರು ಸಂಜೆ ೫:೫೦ ಘಂಟೆಗೆ ಕುಚೇಲನ ಮನೆಗೆ ಶ್ರೀಕೃಷ್ಣ ಬಂದಂತೆ, ಓಮಾನ್ ದೇಶದ ತಮ್ಮ ಭಕ್ತರ ಜ್ಞಾನ, ಭಕ್ತಿ, ವೈರಾಗ್ಯದ ಬಾಗಿಲು ತೆರೆಯಲು ನಮ್ಮ ಉಡುಪಿಯ ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಆಗಮನವಾಯಿತು. ಪುಷ್ಪಮಾಲಿಕೆಯನ್ನು ಅರ್ಪಿಸಿ ಓಂಕಾರ ಸಮಿತಿಯ ಸದಸ್ಯರು ಶ್ರೀಗಳಿಗೆ ಹಾಗೂ ಅವರ ಶಿಷ್ಯ ವೃಂದದವರಿಗೆ ಸ್ವಾಗತ ಕೋರಿದರು.






 


 ನಂತರ ಅಲ್ಲಿಂದ ಅವರಿಗಾಗಿ ಮೀಸಲಾಗಿದ್ದ ಗೃಹಕ್ಕೆ ಕರೆದೊಯ್ಯಲಾಯಿತು.



ಕಟ್ಟಡದ ಮುಖ್ಯ ಪ್ರವೇಶ ದ್ವಾರದಲ್ಲಿ ಐದು ಜನ ಮಹಿಳೆಯರೊಂದಿಗೆ ಪೂರ್ಣಕುಂಭದಿಂದ ಸ್ವಾಗತ ಮೂಲಕ ಮಂಗಳಾರತಿಯೊಂದಿಗೆ ಶ್ರೀಗಳು ದೇವರ ಪೆಟ್ಟಿಗೆ ಸಹಿತ ಗೃಹಕ್ಕೆ ಪ್ರವೇಶಿಸಿದರು.





ಸ್ವಲ್ಪ ವಿಶ್ರಾಂತಿ ಮತ್ತು ಎಲ್ಲ ಭಕ್ತ ವೃಂದದೊಂದಿಗೆ ಮಾತುಕತೆ


ನಂತರ ಸ್ನಾನ, ಜಪಾದಿಗಳನ್ನು ಮುಗಿಸಿ ಶ್ರೀ ರವಿಕುಮಾರ್ ಅವರ ಗೃಹದಲ್ಲಿ ಶ್ರೀಕೃಷ್ಣನ ಶಯನ ಪೂಜೆಯಾದ ಮಸ್ಕತ್ ನಲ್ಲಿ ಶ್ರೀಗಳ ಮೊದಲ ತೊಟ್ಟಿಲು ಪೂಜೆ ಕಾರ್ಯಕ್ರಮ ನೆರವೇರಿತು. ಸ್ವಾಮೀಜಿಯರೊಂದಿಗೆ ಆಗಮಿಸಿದ್ದ ಅಡುಗೆಭಟರಿಂದ ಎಲ್ಲರಿಗೂ ಪ್ರಸಾದದ ವ್ಯವಸ್ಥೆಯಾಗಿತ್ತು.