ಓಂಕಾರ ನಾದಾಮೃತ - ೨೦೧೮
ಮಸ್ಕತ್ ನ ಓಂಕಾರ ಸಮಿತಿಯ (ಓಮಾನ್ ಕರ್ನಾಟಕ ಆರಾಧನಾ ಸಮಿತಿ) "ಓಂಕಾರ ನಾದಾಮೃತ -೨೦೧೮" ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೮ - ೨೦೧೮ ರಂದು ದಾರ್ಸೇಟ್ ನ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸುವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ನಾದಾಮೃತ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಓಂಕಾರ ನಾದಾಮೃತ-೨೦೧೮ ರ ಭಕ್ತಿಸಂಗೀತ ಕಾರ್ಯಕ್ರಮವನ್ನು ಸಾಕಾರಗೊಳಿಸಲು ನಮ್ಮ ಕನ್ನಡನಾಡಿನ ಭಕ್ತಿಸಂಗೀತ ವಿದ್ವಾನ್ ಹರಿದಾಸ ಶ್ರೀ ಸಂಗೀತ ಶಿರೋಮಣಿ ಎಂದೇ ಖ್ಯಾತರಾಗಿರುವ ಶ್ರೀಯುತ ರಾಯಚೂರು ಶೇಷಗಿರಿದಾಸರು ಆಗಮಿಸಿದ್ದರು. ಶ್ರೀಯುತರ ಭಕ್ತಿಪ್ರಧಾನ ಗಾಯನಕ್ಕೆ ತಬಲಾ ವಾದಕರಾದ ಶ್ರೀ ಗೋಪಾಲರಾವ್ ಗುಡಿಬಂಡೆ, ಹಾರ್ಮೋನಿಯಮ್ ವಾದಕರಾದ ಶ್ರೀ ಶ್ರೀಪಾದ ದಾಸ, ಕೊಳಲು ವಾದಕರಾದ ಶ್ರೀ ಜಯತೀರ್ಥ ಕುಲಕರ್ಣಿ ಹಾಗೂ ತಾಳದಲ್ಲಿ ನಮ್ಮ ಮಸ್ಕತ್ ನ ಕಲಾವಿದರಾದ ಶ್ರೀ ಸಚಿನ್ ಕಾಮತ್ ರವರು ಸಾಥ್ ನೀಡಿದರು.
ಸಾಯಂಕಾಲ ಸರಿಯಾಗಿ ೬:೩೦ಕ್ಕೆ ಶ್ರೀಯುತ ರವಿಕುಮಾರ ರಾವ್ ಅವರು ಸ್ವಾಗತ ಭಾಷಣದೊಂದಿಗೆ ಕಲಾವಿದರನ್ನು, ಗಣ್ಯರನ್ನು ಹಾಗೂ ಸಭಿಕರನ್ನು ಅತ್ಯಂತ ಅತ್ಮೀಯವಾಗಿ ಬರಮಾಡಿಕೊಂಡರು.
ಸ್ವಾಗತ ಭಾಷಣ: ಶ್ರೀ ರವಿಕುಮಾರ ರಾವ್ |
ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಅವರು ಕನ್ನಡನಾಡಿನ ಕಲಾವಿದರನ್ನು ಹೂಗುಚ್ಚದೊಂದಿಗೆ ವೇದಿಕೆಗೆ ಆಹ್ವಾನಿಸಿ ಕಿರುಪರಿಚಯ ಮಾಡಿಕೊಟ್ಟರು.
ನಿರೂಪಣೆ: ಶ್ರೀಮತಿ ಶ್ರೀಮಾತಾ ಹಿರಿಯಣ್ಣ |
ನಂತರ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರವರು ಶ್ರೀ ಗಣೇಶ ದೇವರಿಗೆ ಮತ್ತು ಓಂಕಾರ ಸಮಿತಿಯ ಆರಾಧ್ಯದೇವರಾದ ಶ್ರೀ ಆಂಜನೇಯ ಸ್ವಾಮಿಗೆ ಆರತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಆರತಿ: ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ |
ಶ್ರೀಯುತ ರಾಯಚೂರು ಶೇಷಗಿರಿದಾಸ ಅವರು "ಆರಾಧಿಪ ಭಕ್ತರಭಿಷ್ಠ ಪೂರೈಸುವ ಪ್ರಭುವೇ ಬಾರೋ , ರಾಘವೇಂದ್ರ ಬಾರೋ" ಎಂದು ಭಕ್ತಿಪರವಶವಾಗಿ ಹಾಡುತ್ತ ತಮ್ಮ ಗಾಯನಲಹರಿಯನ್ನು ಪ್ರಾರಂಬಿಸಿದರು. ರಾಯ ಬಾರೋ ರಾಘವೇಂದ್ರ ಬಾರೋ, ಜೈ ಜೈ ಹನುಮಾನ್ ಕಿ ಜೈ, ಪವಮಾನ ಜಗದ ಪ್ರಾನ, ಶಿವನು ಬೈರಾಗಿಯಾಗಿ ಬಂದ ನೋಡೇ ಹಾಡುಗಳಿಂದ ಕಾರ್ಯ್ಕ್ರಮದ ರಂಗೇರಿತು. ಶ್ರೀಯುತರು ಹಾಡಿಗೂ ದಾಸ ಸಾಹಿತ್ಯ, ದಾಸವಾಣಿ ಹಾಗೂ ಹಾಡಿನ ತಾತ್ಪರ್ಯದ ಬಗ್ಗೆ ನೀಡುತ್ತಿದ್ದ ಮಾಹಿತಿ ಪ್ರತಿಯೊಬ್ಬ ಸಭಿಕರನ್ನು ತಲ್ಲೀನನನ್ನಾಗಿಸಿ ಗಾಯನದ ಮಾಧುರ್ಯತೆಯನ್ನು ಇಮ್ಮಡಿಗೊಳಿಸಿತು.
ನಂತರ ಕಾರ್ಯಕ್ರಮಕ್ಕೆ ಚಿಕ್ಕ ವಿರಾಮ ನೀಡಿ ತಾಯ್ನಾಡಿನ ಕಲಾವಿದರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಸಮಾರಂಭ ನೆರವೇರಿತು.
ಭಾರತೀಯ ಸಮಾಜಿಕ ಒಕ್ಕೂಟ - ಕರ್ನಾಟಕ ವೇದಿಕೆಯವರಿಂದ ಶ್ರೀ ರಾಯಚೂರು ಶೇಷಗಿರಿದಾಸ ಇವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಭಾರತೀಯ ಸಾಮಾಜಿಕ ವೇದಿಕೆ - ಕರ್ನಾಟಕ ವಿಭಾಗದಿಂದ ಸನ್ಮಾನ |
ಕಾರ್ಯಕ್ರಮಕ್ಕೆ ಉಪಸ್ಥಿತರಾಗಿದ್ದ ಶ್ರೀಯುತ ಜಿ ವಿ ರಾಮಕೃಷ್ಣ, ಶ್ರೀಯುತ ಡಾ ಸಿ ಕೆ ಅಂಚನ್, ಶ್ರೀಯುತ ಮಂಜುನಾಥ ನಾಯಕ ಹಾಗೂ ಶ್ರೀಯುತ ಅನಂತ ಪದ್ಮನಾಭ ಇವರು ಎಲ್ಲ ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ಮತ್ತು ಹಣ್ಣಿನ ತಟ್ಟೆ ನೀಡಿ ಸನ್ಮಾನಿಸಿದರು.
ಸನ್ಮಾನ: ಶ್ರೀ ಸಚಿನ್ ಕಾಮತ |
ಸನ್ಮಾನ : ಶ್ರೀ ಜಯತೀರ್ಥ ಕುಲಕರ್ಣಿ |
ಸನ್ಮಾನ: ಶ್ರೀ ಶ್ರೀಪಾದ ದಾಸ |
ಸನ್ಮಾನ: ಗೋಪಾಲರಾವ ಗುಡಿಬಂಡೆ |
ಓಂಕಾರ ಸಮಿತಿಯು ಶ್ರೀಯುತ ರಾಯಚೂರು ಶೇಷಗಿರಿದಾಸ ಅವರು ಭಕ್ತಿಸಂಗೀತ ಲೋಕಕ್ಕೆ ನೀಡಿದ ಅಪ್ರತೀಮ ಸೇವೆಯನ್ನು ಪರಿಗಣಿಸಿ "ಓಂಕಾರಶ್ರೀ" ಬಿರುದನ್ನು ನೀಡಿ ಗೌರವಿಸಿತು.
ಸನ್ಮಾನ: ಶ್ರೀ ರಾಯಚೂರು ಶೇಷಗಿರಿದಾಸ |
ಓಂಕಾರಶ್ರೀ ಬಿರುದು ನೀಡಿ ಸನ್ಮಾನ |
ವಿರಾಮದ ನಂತರ ಆರು ತೂಗಿದರೂ ಮಲಗನು ಬಾರೇ ಗೋಪಮ್ಮಾ, ಹನುಮಂತ ಹನುಮಂತ, ಗೊಪಿ ಕೇಳೇ ನಿನ್ನ ಮಗ ಚೋರ, ಎನ ಸವಿ ಎನ ಸವಿ ಹರಿನಾಮ ಹಾಡಿನಿಂದ ಸಭಿಕರನ್ನೆಲ್ಲಾ ರೋಮಾಂಚನಗೊಳಿಸಿದರು. ಕಂಡೆನಾ ನರಸಿಂಹನಾ, ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರಾ, ತೋಳು ತೋಳು ತೋಳು ರಂಗ ತೋಳನ್ನಾಡೈ ಮುಂತಾದ ಭಕ್ತಿಗೀತೆಗಳನ್ನು ಸುಮಧುರವಾಗಿ ಹಾಡಿದರು.
ಸಾಂಪ್ರದಾಯಿಕ ಹಾಡಾದ ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮಾ ಹಾಡಿನಿಂದ ಸಭಿಕರ ಹರ್ಷೋದ್ಗಾರಕ್ಕೆ ಪಾತ್ರರಾದರು.
ಪ್ರತಿಬಾರಿಯೂ ಸಭಿಕರೆಲ್ಲರೂ ತಮ್ಮ ಕರತಾಳದ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ತಬಲಾ ಹರ್ಮೋನಿಯಂ, ಕೊಳಲು ಹಾಗೂ ತಾಳವಾದ್ಯದ ಜೊತಗೆ ಸಾಥ್ ನೀಡುತ್ತಿದ್ದ ಕಲಾವಿದರು ಮಧ್ಯ ಮಧ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ತಬಲಾ : ಶ್ರೀ ಗೋಪಾಲರಾವ ಗುಡಿಬಂಡೆ |
ಹಾರ್ಮೋನಿಯಮ್ : ಶ್ರೀ ಶ್ರೀಪಾದ ದಾಸ |
ಕೊಳಲು : ಶ್ರೀ ಜಯತೀರ್ಥ ಕುಲಕರ್ಣಿ |
ತಾಳ : ಶ್ರೀ ಸಚಿನ್ ಕಾಮತ |
ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಸುಮಾರು ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಭಕ್ತಿಗೀತೆಗಳನ್ನು ಹಾಡಿ ಓಂಕಾರ ನಾದಾಮೃತ-೨೦೧೮ ರ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿಸಿದರು.
ಕೊನೆಯದಾಗಿ ಶ್ರೀ ಪವನ್ ಕುಮಾರ ಅವರು ಕಾರ್ಯಕ್ರಮ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ವಂದನಾರ್ಪಣಾ ಕಾರ್ಯಕ್ರಮ ನೆರವೇರಿಸಿದರು.
ವಂದನಾರ್ಪಣೆ : ಶ್ರೀ ಪವನಕುಮಾರ |
"ಇದು ನನ್ನ ಜೀವನದ ವಿದೇಶದ ಕಾರ್ಯಕ್ರಮಗಳಲ್ಲಿ ಅತ್ತ್ಯುತ್ತಮ ಕಾರ್ಯಕ್ರಮ" ಎಂಬ ಶ್ರೀಯುತ ರಾಯಚೂರು ಶೇಷಗಿರಿದಾಸರ ಭಾವುಕ ನುಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಲ್ಲೂ ಸಂತೃಪ್ತಿ ಹಾಗೂ ಸಾರ್ಥಕಥೆಯ ಭಾವ ವ್ಯಕ್ತವಾಗುತ್ತಿತ್ತು.
ಓಂಕಾರ ತಂಡದೊಂದಿಗೆ |
ಓಂಕಾರ ಮಹಿಳಾ ತಂಡದೊಂದಿಗೆ |
ವರದಿ: ಶ್ರೀಮತಿ ಶ್ರೀಮಾತಾ ಹಿರಿಯಣ್ಣ
=======================================================================================
Watch the complete Omkar Naadamrutha-2018 on Youtube:
--------------------------------------------------------------------------------------------------------------------------------------------------------Omkar Naadamrutha - 2018 (Part-1)
Omkar Naadamrutha - 2018 (Part-2)
=======================================================================================
Listen or download the songs of Omkar Naadamrutha-2018:
--------------------------------------------------------------------------------------------------------------------------------------------------------Araadipa bhaktarabhista pooriasuva prabhuve baaro/ ಆರಾಧಿಪ ಭಕ್ತರಭಿಷ್ಠ ಪೂರೈಸುವ ಪ್ರಭುವೇ ಬಾರೋ
Raaya baaro raghavendra baaro / ರಾಯ ಬಾರೋ ರಾಘವೇಂದ್ರ ಬಾರೋ
Shivanu bairagiyagi banda node / ಶಿವನು ಬೈರಾಗಿಯಾಗಿ ಬಂದ ನೋಡೇ
Jai Jai Hanuman ki jai / ಜೈ ಜೈ ಹನುಮಾನ್ ಕಿ ಜೈ
Pavamana Jagada Prana / ಪವಮಾನ ಜಗದ ಪ್ರಾಣ
Enu Olle Hariya Ninna stutisi keluvadu / ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವದು
Hanumanta Hanumanta / ಹನುಮಂತ ಹನುಮಂತ
aaru toogidearoo malaganu Baare Gopamaa / ಆರೂ ತೂಗಿದರೂ ಮಲಗನು ಬಾರೆ ಗೋಪಮಾ
Gopi kele ninna maga yaara iva chora / ಗೋಪಿ ಕೇಳೇ ನಿನ್ನ ಮಗಾ ಯಾರ ಇವಾ ಚೋರಾ
Ena Savi Ena Savi hari naama / ಏನ ಸವಿ ಏನ ಸವಿ ಹರಿನಾಮಾ
Buddhi Maatu Helidare kelabekamma magale / ಬುದ್ಧಿ ಮಾತು ಹೇಳಿದರೇ ಕೇಳಬೇಕಮ್ಮಾ ಮಗಳೇ
Kande Naa Narasimhana / ಕಂಡೆ ನಾ ನರಸಿಂಹನಾ
Pandharapuravemba Dodda nagara alli vithobhanemba dodda saukaara / ಪಂಢರಪುರವೆಂಬ ದೊಡ್ಡ ನಗರ, ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ
Tolu Tolu Tolu Ranga tolannarai / ತೋಳು ತೋಳು ತೋಳು ರಂಗ ತೋಳನ್ನಾರೈ
Bhagyada Lakshmi Baramma / ಭಾಗ್ಯದ ಲಕ್ಷ್ಮೀ ಬಾರಮ್ಮಾ