ಓಂಕಾರ ಜ್ಞಾನಾಮೃತ - ೨೦೧೮

ಓಂಕಾರ ಜ್ಞಾನಾಮೃತ - ೨೦೧೮

ಓಂಕಾರ ಸಮಿತಿಯು ಜ್ಞಾನ, ಭಕ್ತಿ ಹಾಗೂ ಸಂಗೀತವನ್ನು ಮಸ್ಕತ್ ಕನ್ನಡಿಗರಿಗೆ ನಿರಂತರವಾಗಿ ಪಸರಿಸುತ್ತಿದೆ. ಈ ವರ್ಷ ೨೦೧೮ ರ ಸಾಲಿನ ಜ್ಞಾನಾಮೃತದ ಮುಖ್ಯ ಅತಿಥಿಗಳು ಶ್ರೀ ಸೂಲಿಬೆಲೆ ಚಕ್ರವರ್ತಿಯವರು "ರಾಷ್ಟ್ರ ಧರ್ಮ" ವಿಷಯದ ಮೇಲೆ ಓಂಕಾರ ಜ್ಞಾನಾಮೃತ-೨೦೧೮ ರ ಕಾರ್ಯಕ್ರಮವನ್ನು ನಡೆಸಿಕೊಟ್ಟರು.


೨೦೧೮ ಮಾರ್ಚ್ ೧೬ನೇ ತಾರೀಖು ಶುಕ್ರವಾರದಂದು ಓಂಕಾರ ಜ್ಞಾನಾಮೃತ-೨೦೧೮ ರ ಕಾರ್ಯಕ್ರಮ ಶ್ರೀ ಕೃಷ್ಣಮಂದಿರ ಸಭಾಂಗಣದಲ್ಲಿ ಜರುಗಿತು.


ಪ್ರಥಮವಾಗಿ ಶ್ರೀಯುತ ಜಿ. ರವಿಕುಮಾರ ತಮ್ಮ ಸ್ವಾಗತ ಭಾಷಣದ ಮೂಲಕ ಎಲ್ಲ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ, ಓಂಕಾರ ಸಮಿತಿಯು ನಡೆಸುವ ಎಲ್ಲ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿಸಿಕೊಟ್ಟರು. 







ನಂತರ ಶ್ರೀಯುತ ಲಕ್ಷ್ಮೀನಾರಾಯಣ ಆಚಾರ್ಯ ಇವರಿಂದ ಜ್ಞಾನಮೂರ್ತಿಯಾದ ಶ್ರೀ ವಿನಾಯಕನಿಗೆ ಮತ್ತು ಶ್ರೀ ಓಂಕಾರ ಆಂಜನೇಯ ಸ್ವಾಮಿಗೆ ಮಂಗಳಾರತಿ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಚ್ಚಾಲನೆ ಕೊಟ್ಟರು. 



ಶ್ರೀಮತಿ ಕವಿತಾ ರಾಮಕೃಷ್ಣ ಅವರು ಮುಖ್ಯ ಅತಿಥಿಗಳ ಪರಿಚಯದೊಂದಿಗೆ ಕಾರ್ಯಕ್ರಮದ ನಿರೂಪಣೆ ವಹಿಸಿಕೊಂಡರು. 


ತದನಂತರ ಮುಖ್ಯ ಅತಿಥಿಗಳಾದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಪುಷ್ಪಗುಚ್ಚ ನೀಡಿ ವೇದಿಕೆಗೆ ಆಹ್ವಾನಿಸಲಾಯಿತು. 



ಸರಿಯಾಗಿ ೬:೩೦ಕ್ಕೆ ಶ್ರೀ ಸೂಲಿಬೆಲೆ ಚಕ್ರವರ್ತಿಗಳಿಂದ "ರಾಷ್ಟ್ರ ಧರ್ಮ" ವಿಶೇಷತೆಯ ವಾಗ್ಚರಿಯು ಆರಂಭವಾಯಿತು. ನಾಲ್ಕು ಆಶ್ರಮಗಳು, ನಾಲ್ಕು ಪುರುಷಾರ್ಥಗಳು, ಉಪನಿಷತ್ತಿನ ಅದರಲ್ಲೂ ವಿಶೇಷವಾಗಿ ಕೇನೋಪನಿಷತ್ತಿನ ಕಥೆಗಳು, ನಮ್ಮ ಭರತ ಭೂಮಿಯ ಹಿರಿಮೆ-ಗರಿಮೆ, ಇತಿಹಾಸ, ಪ್ರಾಚೀನತೆ, ಸಂಸ್ಕೃತಿಯ ಬೆಡಗು ಮತ್ತು ಅದನ್ನು ಕಾಪಾಡಿಕೊಳ್ಳಲು ನಮ್ಮ ಮಾಡಬೇಕಾದ ಕರ್ತ್ವವ್ಯ ಹಾಗೂ ಜವಾಬ್ದಾರಿಗಳು ಮತ್ತು ಕನಸಿನ ಕರ್ನಾಟಕದ ನಿರ್ಮಾಣ ಹೀಗೆ ಅನೇಕ ವಿಷಯಗಳ ಅಮೃತಧಾರೆಯಿಂದ ನಮ್ಮೆಲ್ಲರ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿದರು. ಸರಿಯಾಗಿ ೮:೦೦ ಘಂಟೆವರೆಗೆ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರು ತಮ್ಮದೇ ಶೈಲಿಯಲ್ಲಿ ಜ್ಞಾನದ ಹೊಳೆಯನ್ನೆ ಹರಿಸಿದರೆಂದರೆ ತಪ್ಪಾಗಲಾರದು. 


















ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರ ಮಾತುಗಳು ಮುಗಿಯುತ್ತಿದ್ದಂತೆಯೇ ಸಭಿಕರೆಲ್ಲರೂ ಎದ್ದು ನಿಂತು ಕರತಾಡನದ ಮುಲಕ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಗೌರವ ಸೂಚಿಸಿದರು.



ನಂತರ ಶ್ರೀಯುತರಿಗೆ ವಿವಿಧ ಸಂಘ-ಸಂಸ್ಥೆಗಳಿಂದ  ಸನ್ಮಾನ ಮಾಡಲಾಯಿತು.

ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗ, ಮಸ್ಕತ್  (ಕರ್ನಾಟಕ ಸಂಘ, ಮಸ್ಕತ್ ) ದಿಂದ ಸೂಲಿಬೆಲೆ ಚಕ್ರವರ್ತಿಯವರಿಗೆ ಸನ್ಮಾನ



ಉಡುಪಿ ಬ್ರಾಹ್ಮಣ ಸಮಾಜ, ಮಸ್ಕತ್ ದವರಿಂದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಸನ್ಮಾನ



ಮಂಗಳೂರು-ಸೋಹಾರ್ ಬಳಗ, ಸೋಹಾರ್ ದವರಿಂದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಸನ್ಮಾನ



ಬಸವ ಬಳಗ, ಮಸ್ಕತ್ ದವರಿಂದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಸನ್ಮಾನ



ಶ್ರೀಯುತ ಜಿ. ವಿ. ರಾಮಕೃಷ್ಣ ಅವರಿಂದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಶಾಲು ಹೊದಿಸಿ ಸನ್ಮಾನ


ಶ್ರೀಯುತ ಮಂಜುನಾಥ ನಾಯಕ ಅವರಿಂದ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ ಹಣ್ಣಿನ ತಟ್ಟೆ ನೀಡುವ ಮೂಲಕ ಸನ್ಮಾನ


ಕೊನೆಗೆ ರಾಷ್ಟ್ರಧರ್ಮ ಮತ್ತು ಧರ್ಮೋನ್ನತಿ ಕಾರ್ಯದಲ್ಲಿ ಸಲ್ಲಿಸಿರುವ ಅಪಾರ ಸೇವೆಯನ್ನು ಪರಿಗಣಿಸಿ ಶ್ರೀಯುತ ಸೂಲಿಬೆಲೆ ಚಕ್ರವರ್ತಿಯವರಿಗೆ "ಓಂಕಾರಶ್ರೀ" ಪ್ರಶಸ್ತಿ ನೀಡಿ ಗೌರವಿಸಲಾಯಿತು.




ಕಾರ್ಯಕ್ರಮದ ಕೊನೆಗೆ ಶ್ರೀಯುತ ಹೆಚ್. ಎನ್. ರವೀಂದ್ರ ಇವರಿಂದ ವಂದನಾರ್ಪಣಾ ಕಾರ್ಯಕ್ರಮ ನೆರವೇರಿತು.



ವರದಿ: ಶ್ರೀಮತಿ ಕವಿತಾ ರಾಮಕೃಷ್ಣ

ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಕ್ಲಿಪ್ ಇಲ್ಲಿದೆ 


Video link on YOUTUBE Click Here