ಶ್ರೀ ಆಂಜನೇಯ ಪೂಜಾ - 2013

ಶ್ರೀ ಆಂಜನೇಯ ಪೂಜಾ - 2013

ಓಂಕಾರ ಸಮಿತಿ ಮಸ್ಕತ್, ಶ್ರೀ ಆಂಜನೇಯ ಪೂಜೆಯನ್ನು ದಿನಾಂಕ ೨೭-ಡಿಸೆಂಬರ್-೨೦೧೩ ರಂದು ಹಮ್ಮಿಕೊಳ್ಳಲಾಗಿತ್ತು. ಪೂಜೆಯ ಎಲ್ಲ ಕಾರ್ಯಕ್ರಮಗಳು ವೇದಮೂರ್ತಿ ಶ್ರೀ ಲಕ್ಶ್ಮೀನಾರಾಯಣ ಆಚಾರ್ಯ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಜಿ ವಿ ರಾಮಕೃಷ್ಣ ಅವರ ತಂದೆ-ತಾಯಿಗಳ ಸಮ್ಮುಖದಲ್ಲಿ ಸಾವಿರಾರು ಭಕ್ತಸಮೂಹದಲ್ಲಿ ಎಲ್ಲ ಪೂಜಾ ಕಾರ್ಯಗಳು ಸಾಂಗವಾಗಿ ನೆರವೇರಿದವು.

ಬೆಳಿಗ್ಗೆ ೮:೨೦ಕ್ಕೆ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಪೂಜಾ ಕಾರ್ಯಕ್ರಮ, ಸಂಕಲ್ಪ, ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಶ್ರೀಗಂಧ ಅಭಿಷೇಕ, ಸುವರ್ಣ ಕಿರೀಟ ಸಮರ್ಪಣೆ, ಅಲಂಕಾರ, ಹರಿವಾಯುಸ್ತುತಿ, ಹನುಮಾನ್ ಚಾಳಿಸಾ, ಭಜನೆ, ಮಹಾಮಂಗಳಾರತಿಯನ್ನೊಳಗೊಂಡು ಮಧ್ಯಾಹ್ನ ೧:೦೦ ಘಂಟೆಗೆ ಮಹಾಪ್ರಸಾದದೊಂದಿಗೆ ಮುಕ್ತಾಯಗೊಂಡಿತು. 

ಓಂಕಾರ ಸದಸ್ಯರು ಮತ್ತು ಸೇವಾಕರ್ತರ ಸಹಯೋಗದಿಂದ ಒಳ್ಳೆಯ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆದು ವೀರ ಕನ್ನಡಿಗ ಶ್ರೀ ಆಂಜನೇಯ ಪೂಜೆಯನ್ನು ಕನ್ನಡಿಗರೆಲ್ಲರೂ ಸೇರಿಕೊಂಡು ಭಕ್ತಿ ಮತ್ತು ಸೇವಾಭಾವದೊಂದಿಗೆ ನಡೆಸಿದ ಈ ಕಾರ್ಯಕ್ರಮ ಕನ್ನಡಿಗರ ಸಾಂಘಿಕ ಶಕ್ತಿ ಮತ್ತು ಭಕ್ತಿ ಮನೋಭಾವಕ್ಕೆ ಉತ್ತಮ ಉದಾಹರಣೆ.